ಚೌಡೇಶ್ವರಿ ಸಿನಿ ಚಿತ್ರಾಲಯ ಲಾಂಛನದಲ್ಲಿ ಚೌಡರೆಡ್ಡಿ(ಬಾಗೇಪಲ್ಲಿ) ಅವರು ನಿರ್ಮಿಸುತ್ತಿರುವ ‘೨೪ ಕ್ಯಾರೆಟ್‘ ಚಿತ್ರದ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ಪಿರಿಯಾಪಟ್ಟಣ ಬಳಿಯ ಬೆಟ್ಟದಪುರದಲ್ಲಿ ನಡೆದಿದೆ. ವಿರಾಟ್, ಪೂಜಾ, ರಿಶಿಕುಮಾರ್ ಸ್ವಾಮೀಜಿ, ರಂಗಾಯಣರಘು, ಶೋಭ್ರಾಜ್, ಕರುಣಾಕರ್ ಮುಂತಾದವರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಒಂದು ಹಾಡಿನ ಚಿತ್ರೀಕರಣ ಬಾಕಿಯಿದ್ದು ಉಳಿದ ಚಿತ್ರೀಕರಣ ಪೂರ್ಣವಾಗಿದೆ ಎನ್ನುತ್ತಾರೆ ನಿರ್ದೇಶಕ ಎಸ್.ಉಮೇಶ್.
ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಎ.ಟಿ.ರವೀಶ್ ಸಂಗೀತ ನೀಡುತ್ತಿದ್ದಾರೆ. ದೀಪು ಛಾಯಾಗ್ರಹಣ, ಸಂಜೀವರೆಡ್ಡಿ ಸಂಕಲನ, ಬಾಬುಖಾನ್ ಕಲಾ ನಿರ್ದೇಶನ, ನಂಜುಂಡಿನಾಗರಾಜ್, ಡೈನಾಮೆಟ್ ಶಿವು ಸಾಹಸ ನಿರ್ದೇಶನವಿರುವ ಈ ಚಿತ್ರದ ಸಹ ನಿರ್ಮಾಪಕರು ಸಿ.ಎಂ.ಕೃಷ್ಣಪ್ಪ.
ವಿರಾಟ್ ಹಾಗೂ ಪೂಜಾ ಎಂಬ ನೂತನ ಪ್ರತಿಭೆ ನಾಯಕ, ನಾಯಕಿಯಾಗಿ ನಟಿಸುತ್ತಿರುವ ‘೨೪ ಕ್ಯಾರೆಟ್‘ ಚಿತ್ರದ ತಾರಾಬಳಗದಲ್ಲಿ ರಿಶಿಕುಮಾರ ಸ್ವಾಮೀಜಿ, ರಂಗಾಯಣರಘು, ಶೋಭ್ರಾಜ್, ಸುರೇಶ್ ಮಂಗಳೂರು, ಧನಂಜಯ್, ಸುಧಾಬೆಳವಾಡಿ, ಪೆಟ್ರೋಲ್ ಪ್ರಸನ್ನ, ಅಮರನಾಥ್ ಆರಾಧ್ಯಾ, ಕರುಣಾಕರ್, ಕೃಷ್ಣಕುಮಾರ್ ಮುಂತಾದವರಿದ್ದಾರೆ. ರಿಶಿಕುಮಾರ್ ಸ್ವಾಮೀಜಿ ಪುತ್ರಿ ಲಿಖಿತ ಕೂಡ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.